ಕರ್ನಾಟಕ ಕ್ರಶ್ ಎಂದೇ ಕರೆಸಿಕೊಳ್ಳುವ ನಟಿ ರಶ್ಮಿಕಾ ಮಂದಣ್ಣಗೆ ಅವರು ನಗುಮುಖವೇ ಅಂದ-ಚೆಂದ. ಅವರಂತೆ ನಗುವ ಇನ್ನೊಬ್ಬ ನಟಿ ಅಪರೂಪ ಅಥವಾ ಅಚ್ಚರಿ ಎನ್ನಬಹುದು. ಸದಾ ಹಸನ್ಮುಖಿಯಾಗಿ ಕಾಣಿಸಿಕೊಳ್ಳುವ ರಶ್ಮಿಕಾ ಒಂದು ರೀತಿ ಪಾಸೀಟಿವ್ ಎನರ್ಜಿ ಎಂದು ಸಹನಟರು ಹೇಳಿರುವ ಉದಾಹರಣೆಯೂ ಇದೆ. ಇಂತಹ ರಶ್ಮಿಕಾ ಮಂದಣ್ಣ ಅವರನ್ನೇ ಹೋಲುವ ಮತ್ತೊಬ್ಬ ನಟಿ ಈಗ ಗಮನ ಸೆಳೆಯುತ್ತಿದ್ದಾರೆ. ಕನ್ನಡದಲ್ಲೊಂದು ಹೊಸ ಧಾರಾವಾಹಿ ಆರಂಭವಾಗುತ್ತಿದ್ದು, ಈ ಸೀರಿಯಲ್ ನ ನಾಯಕಿಯಾಗಿ ಈಕೆ ನಟಿಸುತ್ತಿದ್ದಾರೆ.